ಪರಿಶುದ್ಧವಾದ ಕೈಗಳಲ್ಲಿ ನಿಮ್ಮ ಮಗುವಿನ ಬೆಳವಣಿಗೆ

ನಮ್ಮ ಬಗ್ಗೆ

ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗಲು ಹಾಗೂ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ 2018 ರಲ್ಲಿ ಬ್ರೈನ್ ಚೈಲ್ಡ್ ಟ್ರಸ್ಟ್ ಅನ್ನು ಸ್ಥಾಪನೆ ಮಾಡಲಾಯಿತು. ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ನಿರ್ವಹಿಸಲು ಮಕ್ಕಳು ಮತ್ತು ಪೋಷಕರನ್ನು ಸಶಕ್ತರನ್ನಾಗಿ ಮಾಡುವುದು ಟ್ರಸ್ಟ್ ನ ಉದ್ದೇಶವಾಗಿದೆ.

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈಗಿನ ಆಗು ಹೋಗುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೂ ಮಾಹಿತಿಯನ್ನು ಒದಗಿಸುವ ಬಗ್ಗೆ ನಾವು ಒತ್ತು ನೀಡಿದ್ದೇವೆ.

ವೈದ್ಯಕೀಯ ಹಾಗೂ ವೈದ್ಯಕಿಯೇತರ ವೈಶಿಷ್ಟ್ಯತೆಗಳ ಬಗ್ಗೆ ಪೋಷಕರು ಹಾಗು ವೃತ್ತಿಪರರಿಗೆ ಅರಿವು ಮೂಡಿಸಲು ಸಿ.ಎಂ.ಇ. ಹಾಗೂ ಕಾರ್ಯಗಾರಗಳನ್ನು ನಡೆಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಕೊಡುಗೆ ನೀಡುವುದು ಟ್ರಸ್ಟ್ ನ ಗುರಿಯಾಗಿದೆ.

ಡಾ. ಸಿ.ಪಿ ರವಿಕುಮಾರ್ ಅವರ ಬಗ್ಗೆ

ಡಾ. ಸಿ.ಪಿ ರವಿಕುಮಾರ್ ಅವರು ಮಕ್ಕಳ ನರರೋಗ ತಜ್ಞರು ಮತ್ತು ಮಕ್ಕಳ ಬೆಳವಣಿಗೆಯ ಮೇಲೆ ಪರಿಸರದ ಪ್ರಭಾವಗಳ ವಿಷಯದ ಮೇಲಿನ ಭಾಷಣಕಾರರು. ಡಾ. ಸಿ.ಪಿ ರವಿಕುಮಾರ್ ಅವರು ಲಂಡನ್ ನ 'ರಾಯಲ್ ಕಾಲೇಜ್ ಆಫ್ ಪೀಡಿಯಾಟ್ರಿಕ್ಸ್‌' ನಿಂದ ಶಿಶು ವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ತರಬೇತಿಯನ್ನು ಮುಗಿಸಿದ್ದಾರೆ. ತರಬೇತಿಯ ವೇಳೆ ಅವರು ಲಂಡನ್ ನ 'ಎವೆಲಿನಾ ಲಂಡನ್ ಮಕ್ಕಳ ಆಸ್ಪತ್ರೆ' (ಗಯ್ಸ್‌ ಅಂಡ್ ಸೆಂಟ್ ಥಾಮಸ್ ಅಸ್ಪತ್ರೆ), ಸೆಂಟ್ ಜಾಜ್ರ್ಸ್‌ ಆಸ್ಪತ್ರೆ ಹಾಗೂ ನ್ಯಾಷನಲ್ ಸೆಂಟರ್ ಆಫ್ ಯಂಗ್ ಪೀಪಲ್ ವಿತ್ ಎಪಿಲೆಪ್ಸಿ (ಈಗ ಯಂಗ್ ಎಪಿಲೆಪ್ಸಿ ಎಂದು ಕರೆಯಲ್ಪಡುತ್ತದೆ) ಸೇರಿದಂತೆ ಹಲವಾರು ಪ್ರಸಿದ್ಧ ನರವಿಜ್ಞಾನ ಕೇಂದ್ರಗಳಲ್ಲಿಯೂ ತರಬೇತಿಯನ್ನು ಪಡೆದಿದ್ದಾರೆ.

ಇನ್ನಷ್ಟು ಮಾಹಿತಿ

ಸಾಮಾನ್ಯ ಪ್ರಶ್ನೆಗಳು

ಅವಸರ ಪಡದೆ ಶಾಂತವಾಗಿರಿ ಮತ್ತು ಆ ವ್ಯಕ್ತಿಗೆ ಸಂಪುರ್ಣ ಪ್ರಜ್ಞೆ ಬರುವವರೆಗೆ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ. ಬೇರೆ ಬೇರೆ ಬಗೆಯ ಫಿಟ್ಸ್‌ಗಳಿಗೆ ಬೇರೆ ಬೇರೆ ಬಗೆಯಲ್ಲಿ ಆರೈಕೆ ಮಾಡಬೇಕಾಗುತ್ತದೆ. ಆದರೆ  ಸಾಮಾನ್ಯವಾಗಿ ನೀವು ಮಾಡಬೇಕಾದ್ದು ಇಷ್ಟು:
* ಫಿಟ್ಸ್‌ ಬಂದಾಗ ಹಾಗೂ ಅದು ಕೊನೆಯಾದಾಗ ಸಮಯ ಎಷ್ಟು ಎನ್ನುವುದನ್ನು ನೋಡಿಕೊಳ್ಳಿ.  ಇದರಿಂದ ಎಷ್ಟು ಹೊತ್ತು ಫಿಟ್ಸ್‌ ಇತ್ತು ಎನ್ನುವುದು ಗೊತ್ತಾಗುತ್ತದೆ.
* 5 ನಿಮಿಷಕ್ಕಿಂತ ಹೆಚ್ಚು ಹೊತ್ತು ಫಿಟ್ಸ್‌ ಇದ್ದರೆ ಅಥವಾ ಸಂಪುರ್ಣ ಚೇತರಿಸಿಕೊಳ್ಳದೇ ಪುನರಾವರ್ತನೆಯಾದರೆ ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ.
* ವ್ಯಕ್ತಿ ಚೇತರಿಸಿಕೊಂಡು ಸಂಪುರ್ಣ ಪ್ರಜ್ಞೆ ಬರುವವರೆಗೂ ಅವರ ಜೊತೆಯಲ್ಲೇ ಇರಿ.
ವೈದ್ಯರು ಅಥವಾ ನರಶಾಸ್ತ್ರಜ್ಞರು ಅಪಸ್ಮಾರವನ್ನು ಪತ್ತೆಹಚ್ಚುತ್ತಾರೆ. ಫಿಟ್ಸ್‌ ಬರುವ ಮುಂಚೆ, ಫಿಟ್ಸ್‌ ಕಾಣಿಸಿಕೊಂಡ ಸಂದರ್ಭ ಹಾಗೂ ಬಳಿಕ ಏನಾಯಿತು ಎಂಬಂತಹ ಹಲವು ಪ್ರಶ್ನೆಗಳನ್ನ ವೈದ್ಯರು ಕೇಳಬಹುದು. ರೋಗಿಯ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯನ್ನ ಅಳೆಯಲು ಎಲೆಕ್ಟ್ರೋ ಎನ್ಸೆಫಾಲೋ ಗ್ರಾಮ್ ಪರೀಕ್ಷೆಗೆ (ಇಇಜಿ) ಒಳಪಡಿಸಲಾಗುತ್ತದೆ. ಜೊತೆಗೆ ಎಂ.ಆರ್ .ಐ .  ಸ್ಯಾನ್ ಕೂಡ ಮಾಡಬೇಕಾಗಬಹುದು. ಈ ಪರೀಕ್ಷೆಗಳಿಂದ ಸಿಗುವ ಮಾಹಿತಿ ಆಧರಿಸಿ ಅಪಸ್ಮಾರದ ರೋಗ ನಿರ್ಣಯ ಮಾಡಬಹುದು.
ಅಪಸ್ಮಾರವು ಸಾಂಕ್ರಾಮಿಕವಲ್ಲ. ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಬಹುತೇಕ ಸಂದರ್ಭದಲ್ಲಿ ವ್ಯಕ್ತಿಗೆ ಅಪಸ್ಮಾರ ಯಾಕೆ ಇರುತ್ತದೆ ಎಂಬುದು ತಿಳಿಯುವುದಿಲ್ಲ- ಇದನ್ನ ಇಡಿಯೋಪಾಥಿಕ್ ಅಪಸ್ಮಾರ ಅಥವಾ ಸ್ವಯಂಜನ್ಯ ಅಪಸ್ಮಾರ ಎನ್ನುತ್ತಾರೆ. ಉಳಿದ ಪ್ರಕರಣಗಳಲ್ಲಿ ಆನುವಂಶಿಕತೆ ಕಾರಣವಾಗಿರಬಹುದು. ಅಪಸ್ಮಾರಕ್ಕೆ ಕಾರಣ ತಿಳಿದಾಗ ಅದನ್ನು ಸೆಕೆಂಡರಿ ಅಪಸ್ಮಾರ ಅಥವಾ ರೋಗಲಕ್ಷಣದ ಅಪಸ್ಮಾರ ಎನ್ನುತ್ತಾರೆ. ಮೆದುಳಿನಲ್ಲಿ ಗಾಯ, ಸ್ಟ್ರೋಕ್ ಸೋಂಕುಗಳಿಂದ ಕೂಡಾ ಇದು ಕಾಣಿಸಿಕೊಳ್ಳಬಹುದು
ಅವು ಒಂದಕ್ಕೊಂದು ಸಂಬಂಧಿಸಿದ್ದೇ ಆದರೂ ಎರಡೂ ಒಂದೇ ಅಲ್ಲ. ಫಿಟ್ಸ್‌ ಎಂದರೆ ಮೆದುಳಿನ ಚಟುವಟಿಕೆಯಲ್ಲಿ ಸ್ವಲ್ಪ ಹೊತ್ತಿನ ಮಟ್ಟಿಗೆ ಅಡ್ಡಿಯಾಗುವುದು. ಇದು ಮೆದುಳಿನ ಕೆಲಸಕ್ಕೆ ಅಡ್ಡಿ ಪಡಿಸುತ್ತದೆ. ಯಾರಿಗೆ ಬೇಕಾದರೂ ಫಿಟ್ಸ್‌ ಬರಬಹುದು, ಹಾಗಂತ ಅದು ಅಪಸ್ಮಾರ ಎಂದು ತಿಳಿಯಬೇಕಿಲ್ಲ. ಅಪಸ್ಮಾರವೆಂಬುದು ಮೆದುಳಿನ ಅಸ್ವಸ್ಥೆತೆಯಾಗಿದ್ದು, ಪದೇ ಪದೇ ಫಿಟ್ಸ್‌ಗೆ ಒಳಗಾಗುತ್ತಾರೆ.

Medical Info

Health Info

Consulting Locations

ವಿಳಾಸ

# 43/2, ಹೊಸ ವಿಮಾನ ನಿಲ್ದಾಣ ರಸ್ತೆ, NH7, ಸಹಕಾರಾ ನಗರ, ಹೆಬ್ಬಾಳ, ಬೆಂಗಳೂರು - 560092 ದೂರವಾಣಿ ಸಂಖ್ಯೆ: 08043420100, 07829910888

ಲಭ್ಯತೆ

ಸೋಮವಾರದಿಂದ ಶನಿವಾರದ ವರೆಗೆ (ಮಂಗಳವಾರ ಹಾಗು ರಜಾದಿನಗಳು ಹೊರತುಪಡಿಸಿ) ನೀವು ಬರುವ ಮೊದಲು ದಯವಿಟ್ಟು ಕರೆ ಮಾಡಿ

ಕಾಯ್ದಿರಿಸಿ

ವಿಳಾಸ

ನಂ .6, ಚಿತ್ರಪುರ ಭವನ, 8 ನೆಯ ಮುಖ್ಯ ರಸ್ತೆ, 15 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು - 560055 ದೂರವಾಣಿ ಸಂಖ್ಯೆ: 08041205034

ಲಭ್ಯತೆ

ಶುಕ್ರವಾರ ಸಂಜೆ ಮಾತ್ರ ನೀವು ಬರುವ ಮೊದಲು ದಯವಿಟ್ಟು ಕರೆ ಮಾಡಿ.

ಕಾಯ್ದಿರಿಸಿ

ವಿಳಾಸ

ನಂ .898, ಚ-44, ನಾರಾಯಣ ಶಾಸ್ತ್ರಿ ರಸ್ತೆ, ಲಕ್ಷ್ಮಿಪುರಂ, ಮೈಸೂರು. ದೂರವಾಣಿ ಸಂಖ್ಯೆ: 08212519995 ಅಥವಾ 08212440499

ಲಭ್ಯತೆ

6th ಡಿಸೆಂಬರ್ 8th ಜನವರಿ

ಕಾಯ್ದಿರಿಸಿ

ವಿಳಾಸ

ಅಶ್ವಿನಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ರಿಸರ್ಚ್ ಸೆಂಟರ್, BLDE ರಸ್ತೆ, ಬಿಜಾಪುರ, ಕರ್ನಾಟಕ. ದೂರವಾಣಿ ಸಂಖ್ಯೆ: 09591291005

ಲಭ್ಯತೆ

18th ಡಿಸೆಂಬರ್ 22nd ಜನವರಿ

ಕಾಯ್ದಿರಿಸಿ

ವಿಳಾಸ

ಹಾಜಿ ಕಾಲನಿ, ರಾಯಚೂರು, ಕರ್ನಾಟಕ - 584101. ದೂರವಾಣಿ ಸಂಖ್ಯೆ: 09448777088

ಲಭ್ಯತೆ

25th ಡಿಸೆಂಬರ್ 29th ಜನವರಿ

ಕಾಯ್ದಿರಿಸಿ

ವಿಳಾಸ

3 ನೇ ಮುಖ್ಯ ರಸ್ತೆ, ಸತ್ಯನಾರಾಯಣಪೇಟೆ, ಬಲ್ಲಾರಿ. 583101 ದೂರವಾಣಿ ಸಂಖ್ಯೆ: 08392275224 ಅಥವಾ 09731823333 ಅಥವಾ 09901947105

ಲಭ್ಯತೆ

15th ಜನವರಿ 12th ಫೆಬ್ರುವರಿ

ಕಾಯ್ದಿರಿಸಿ

Testimonials

Untitled

Dr.Ravikumar is a humble companion of the parents. Every concern we have had about our son’s health has been answered compassionately. So blissful to have such amazingly passionate professional of global standards in Bengaluru.

Sukumar

Parent

Untitled

ಡಾ ರವಿಕುಮಾರ್ ಅವರೊಂದಿಗೆ ನಾನು ಬಹಳ ಒಳ್ಳೆಯ ಅನುಭವ ಹೊಂದಿದ್ದೇನೆ. ನನ್ನ ಮಗುವಿಗಾಗಿ ವೈದ್ಯರನ್ನ ಸಂಪರ್ಕಿಸಿದಾಗ ನಿರಾಳನಾದೆ. ನಾನು ಗಮನಿಸಿದ ಮುಖ್ಯ ಅಂಶವೆಂದರೆ ವೈದ್ಯರೊಂದಿಗಿನ ಸಮಾಲೋಚನೆ ಸ್ಪಷ್ಟವಾಗಿತ್ತು. ನನ್ನ ಮಗಳ ಸಮಸ್ಯೆಗಳ ಬಗ್ಗೆ ಆಳವಾದ ಚರ್ಚೆ ನಡೆಸಿದೆವು.

ರಾಕೇಶ್ ಕೆ.ವಿ

Parent

ಸಂಪರ್ಕಿಸಿ

ಇತ್ತೀಚಿನ ವೈದ್ಯಕೀಯ ಮಾಹಿತಿ ಹಾಗೂ ಇತರೆ ಸುದ್ದಿಗಳಿಗಾಗಿ ಚಂದಾದಾರರಾಗಿ

ಸಹಾಯ ಬೇಕೆ?

ಇನ್ನಿತರೆ ಯಾವುದೇ ಪ್ರಶ್ನೆಗಳಿದ್ದರೆ ನಮಗೆ ಬರೆಯಿರಿ ಅಥವಾ ಕರೆ ಮಾಡಿ
    • info@brainchildtrust.com
  • + 91 78299 10888